Friday 27 March 2020

'ಹಿಂದುತ್ವ, ರಾಷ್ಟ್ರೀಯತೆ - ಸಂಕುಚಿತ ಚಿಂತನೆಗಳೆ...!?' - ಒಂದು ಸಂವಾದ.




'ಹಿಂದುತ್ವ, ರಾಷ್ಟ್ರೀಯತೆ - ಸಂಕುಚಿತ ಚಿಂತನೆಗಳೆ...!?' 

- ಒಂದು ಸಂವಾದ.

~ ಉಪನ್ಯಾಸಕರು: 

ಶ್ರೀ ರಘುನಂದನ ಜೀ

'ಪ್ರಜ್ಞಾ ಪ್ರವಾಹ'. ಹಿರಿಯ ಪ್ರಚಾರಕರು,
ರಾಷ್ಟ್ರೀಯ ಸ್ವಯಂಸೇವಕ ಸಂಘ, ಹುಬ್ಬಳ್ಳಿ.



ಅಧ್ಯಕ್ಷರು:
ಶ್ರೀ ರಾಮದಾಸು ಸಂಗನಕಲ್ಲು.
ಪ್ರಾಚ್ಯವಸ್ತು ಸಂಶೋಧಕರು, ಪ್ರಾಗೈತಿಹಾಸಿಕ ತಙ್ಞರು, 
ಆಧ್ಯಾತ್ಮಿಕ ಸಾಧಕರು.



'ಪುನರುತ್ಥಾನ' ಉಪನ್ಯಾಸ ಚಕ್ರ...! ವ್ರುತ್ತ ೩...

೨೫ ಮಾರ್ಚ್, ಮಂಗಳವಾರ, ೨೦೨೦.

'ಮಠದ ಅಂಗಳ', ಶ್ರೀ ಮರಿಸ್ವಾಮಿಗಳ ಮಠ, 
ಭಾಪತಿ ಬೀದಿ, ದೊಡ್ಡ ಮಾರುಕಟ್ಟೆ ಹಿಂಭಾಗ, ಬ್ರೂಸ್ ಪೇಟೆ,
ಬಳ್ಳಾರಿ - ೫೮೩೧೦೩.











'ಹಿಂದುತ್ವ, ರಾಷ್ಟ್ರೀಯತೆ - ಸಂಕುಚಿತ ಚಿಂತನೆಗಳೇ...!? ಒಂದು ಸಂವಾದ'...
- ಶ್ರೀ ರಘುನಂದನ ಜೀ
'ಪುನರುತ್ಥಾನ' ಉಪನ್ಯಾಸ ಚಕ್ರ...! ವೃತ್ತ ೩...

Punarutthaana ಪುನರುತ್ಥಾನ 
- you tube Channel Links:



Sunday 5 February 2017

ಸಿರಿಯೊಡೆಯನ ಸಾಲುಗಳು...

ಶ್ರೀ ಗುರುಭ್ಯೋಃ ನಮಃ... ಹರಿಃ ಓಂ..

ಶ್ರೀ ಹನುಮ ಭೀಮ ಗುರುಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು...

~ ಮಧ್ವನವಮಿ, ೦೫/೦೨/೧೭. ಬಳ್ಳಾರಿ.



ಶ್ರೀ...

ಸಿರಿಯೊಡೆಯನ ಸಾಲುಗಳು...



 





Saturday 7 January 2017

'ಸಂಚಯನ'ಗೊಳ್ಳಲಿ ಅಂದು, ಆ ಸುದಿನದಂದು... ನನ್ನ ತಪಸಿನಾ 'ಅಸ್ತಿ'ಯು...

Hutathma, Sri.Nathuram Godse.

















'ಸಂಚಯನ'ಗೊಳ್ಳಲಿ ಅಂದು, ಸುದಿನದಂದು...
'ಸಿಂಧು'ವಿನಲ್ಲಿ, 'ಸಿಂಧು'ವಿನ ಪವಿತ್ರ 'ಜಲ ಜನ ಲಹರಿ'ಯಲ್ಲಿ...
ನಾಗರಿಕತೆಯ 'ಹೊನ್ನತೊಟ್ಟಿಲಿ'ನಲ್ಲಿ... ಭಾರತದ 'ರಾಷ್ಟ್ರನದಿ'ಯಲ್ಲಿ
ರಾಷ್ಟ್ರಬಾಂಧವರ 'ಹೃನ್ಮನ'ಗಳಲಿ...
'ಸಂಚಯನ'ಗೊಳ್ಳಲಿ ಅಂದು, ಸುದಿನದಂದು... ನನ್ನ ತಪಸಿನಾ 'ಅಸ್ತಿ'ಯು...

'ನನ್ನಸ್ತಿ'ಗಳಿಗೆ ಸಿಗಲಂದು, 'ಸಿಂಧು'ವಿನ 'ಸಿಂಧುತ್ವ'
ಲೀನವಾಗಲಿ ನನ್ನಾತ್ಮತಾನಂದು... ಅಧ್ಯಾತ್ಮದಾನಂದದಲಿ, 'ಭರತ ತತ್ವ'ದೊಳು...
'ಎಕಾತ್ಮಕತೆ' 'ಮುಕುತಿ'ಯನು, ತಾನ್ ಪಡೆಯಲಿ ಅಂದು... ವಿಶ್ವಾತ್ಮಭಾವದೊಳು...!
'ಸಂಚಯನ'ಗೊಳ್ಳಲಿ ಅಂದು, ಸುದಿನದಂದು... ನನ್ನ ತಪಸಿನಾ 'ಅಸ್ತಿ'ಯು...

ಆವದಿನ ಮತ್ತೋಮ್ಮೆ, ಸುದಿನದಂದು... ಸ್ವಾತಂತ್ರ್ಯದುಲ್ಲಾಸದೊಳು...!
'ಸಿಂಧು'ತಾನ್ ಸ್ವಚ್ಛಂದದಲಿ, ಮುದದಿ ಹರಿಯುವಳೊ... ತನ್ನದೇ ನಾಡಿನೋಳು...
ಹರಸುವಳೋ 'ತನ್ನಾತ್ಮ ರಾಷ್ಟ್ರಜರ'ನು... ತಾಯ ವಾತ್ಸಲ್ಯದೊಳು...!
ಭಾರತದ 'ರಾಷ್ಟ್ರಭೂಪಟ' ಹೆಮ್ಮೆಯ ಭಾಗ ತಾನಾಗಿ, ನಾಡಿನಾ ಜೀವ ನದಿಯಾಗಿ...
'ಸಂಚಯನ'ಗೊಳ್ಳಲಿ ಅಂದು, ಸುದಿನದಂದು... ನನ್ನ ತಪಸಿನಾ 'ಅಸ್ತಿ'ಯು...

ಆವದಿನ ಮತ್ತೋಮ್ಮೆ, ಸುದಿನದಂದು... ಸ್ವಾಭಿಮಾನದುತ್ಕರ್ಷದಲಿ...!
ದೇಶವಿಭಜನೆಯ ದಾರುಣವು ತಾನ್ ಅಳಿದು, ಅಖಂಡ ಭರತವರ್ಷವು ಮೈದಳೆದು...
'ಸಿಂಧುರಾಷ್ಟ್ರ'ವದು ಮತ್ತೋಮ್ಮೆ ತಾನೆದ್ದು, ವೀರರಸದಾರ್ಭಟದಿ... 
'ವಿಕ್ರಮಾರ್ಜಿತ ಸತ್ಯ ಸತ್ವ'ದಲಿ...!

ಮತ್ತೆ ತಾನೆಂದು ಸಾಗುವುದೋ ಭರತ ಖಂಡವು ತಾನ್, 'ಸಿಂಧು' ಲಹರಿಯಾ ಪಯಣದಲಿ...
'ನಿಜ ಮುಕುತಿಪಥ'ದಲ್ಲಿ... 'ವಿಶ್ವದಾಗುರು'ವಿನಂದದಲಿ...
'ಸಂಚಯನ'ಗೊಳ್ಳಲಿ ಅಂದು, ಸುದಿನದಂದು... ನನ್ನ ತಪಸಿನಾ 'ಅಸ್ತಿ'ಯು...

~ ಆತ್ಮಾಹುತ ,
ಶ್ರೀ ನಾಥೂರಾಮ ಗೋಡ್ಸೆ ಹಾಗೂ ಶ್ರೀ ನಾರಾಯಣ ಆಪ್ಟೆ...
…ಹಾಗೂ ಅವರ ಸಹವರ್ತಿಗಳ ನೆನಪಲ್ಲಿ, ನುಡಿನಮನ...
ಭಾವಪೂರ್ಣ ಶ್ರದ್ಧಾಂಜಲಿ...!

~ ಶ್ರೀನಾಥ ಜೋಷಿ,
ನವೆಂಬರ್ 15, 2016 ಪವಿತ್ರದಿನದಂದು, ಬಳ್ಳಾರಿ.

Friday 6 January 2017

ಯೋಧ ದೀಪಾವಳಿ...! ಇದು, ಮರೆಯಲಾಗದ ನೆನಪಿನಾವಳಿಯು...!

My self  along with my Companion, Sri.Nagendra, celebrating  Deepavali with Ex Service person, Sri.Lakshman and his  family, at his residence in Ballari.
ಯೋಧ ದೀಪಾವಳಿ...!
ಇದು, ಮರೆಯಲಾಗದ ನೆನಪಿನಾವಳಿಯು...!

'ನಮ್ಮೂರಿನ ಆಲದಾ ಮರ' ಕೊಂಬೆಯೊಳು,
'ಯೋಧ ಬಂಧು'ವಿನ ಗೂಡಿನಲಿ...
'ಒಡಲಮರಿಹಕ್ಕಿ'ಯೂ ತಾನ್ ಮುದದಿ ಗಡಿಯಕಾಯ್ದಿರಲು...
ತಂದೆಯನನುಸರಿಸಿ, ತಂದೆತಾಯ್ಗಳ ಹೆಮ್ಮೆಯಲಿ... 
ಪರಂಪರೆಯಮೆರೆಸುತಲಿ...!
ದೇಶ ತಾನ್ ಕರೆದಿರಲು... ಕರ್ತವ್ಯದಾ ಪ್ರಙ್ಞೆಯೊಳು
ರಾಷ್ಟ್ರದನುಸಂಧಾನದೊಳು...!

ದೀಪಾವಳಿಯ ಬೆಳಕದು, ಊರಕೇರಿಯನೆಲ್ಲ ತುಂಬಿರಲು...
ಮರಿಹಕ್ಕಿಯಾ ಅನುಪಸ್ಥಿತಿಯು ಕಾಡಿರಲು, ಗೂಡಿನಲಿ...
ಸಡಗರವು ಸವೆದಿರಲು, ಬೆಳಕಿನಹಬ್ಬದಾ ಸಂಜೆಯೊಳು...

ಪೂರ್ವಸುಕೃತದ ಫಲವೋ ಅದು, ನಾಕಾಣೆ...! 
ಬರಮಾಡಿಕೊಂಡರವರು,ತಮ್ಮ ಒಲವಿನಾ ಗೂಡಿನೊಳು... 
ನನ್ನನ್ನು, ನನ್ನಾತ್ಮೀಯನನು...! 'ನಮ್ಮಲ್ಲಿ', 
ತಮ್ಮ ಮರಿಹಕ್ಕಿಯನು ಕಾಣುವ ಅಂತಃಕರಣದಾ
ಓದಾರ್ಯದಲಿ...!ದೀಪದಾವಳಿಯ ಆಶಯದಿ...! 

ಅಂದು ಗೂಡಲ್ಲಿ... ಎಲ್ಲರೂ ಒಂದಾಗಿ, ಗೆಳೆಯನೊಡಗೂಡಿ...
ದೀಪದಾವಳಿಯ ಸಡಗರದಿ... ತಾಯೆ ಭಾರತಿಯ ಸಂಧ್ಯಾ ಪೂಜನದಿ...
ಸ್ಫೂರ್ತಿರಶ್ಮಿಯ ಸಿಂಚನವು...! ರಮ್ಯ ರೋಮಾಂಚನವು...!
ಶ್ರದ್ಧಾ ಸುಮನ ನಮನಗಳ, ಭಾವಸ್ಫುರಣವದು...!
ಧನ್ಯತೆಯ, ರಾಷ್ಟ್ರದನುಭೂತಿಯು...!

ಯೋಧ ದೀಪಾವಳಿ...!
ಇದು, ಮರೆಯಲಾಗದ ನೆನಪಿನಾವಳಿಯು...!


# ನವೆಂಬರ್ ೦೧, ದೀಪಾವಳಿಯ ಸಂಜೆ. ೨೦೧೬, ಬಳ್ಳಾರಿ.

~ ನಮ್ಮ ಬಳ್ಳಾರಿಯ, ಹೆಮ್ಮೆಯ... ಶ್ರೀಯುತ ಲಕ್ಷ್ಮಣ್ ಅವರು...
ಭಾರತೀಯ ಸೇನೆಯ, ಓರ್ವ ಪೂರ್ವ ಯೋಧರು. ಸೇನಾಪಡೆಯ ಹಿರಿಯ ಪದಾಧಿಕಾರಿಗಳೂ ಆಗಿಮೂರು ದಶಕಗಳ ಕಾಲ ದೇಶದ ಪೂರ್ವ-ಪಶ್ಚಿಮೋತ್ತರ ಗಡಿಗಳುದ್ದಕ್ಕೂ ಮಹತ್ವದ ಸೇವೆಸಲ್ಲಿಸಿರುವರು...
...ಹಾಗೂ ಅವರ ಪುತ್ರರೂ ಸಹಿತ, ಪ್ರಸ್ತುತ ಸೇನೆಯಭಾಗವಾಗಿ, ದೇಶರಕ್ಷಣೆಯಲ್ಲಿ ನಿರತರಾಗಿರುವರು. ಪ್ರಸ್ತುತ ಗಡಿಯಲ್ಲಿನ ವಿಶಮಸ್ಥಿತಿಯಲ್ಲಿ, ವರ್ಷದ ಹಬ್ಬದ ಹಾಗೂ ಕುಟುಂಬದ ಕಾರ್ಯಕ್ರಮದ ನಿಮಿತ್ತವೂ, ಊರಿಗೆ ಬರಲಾಗದೆ... ತಮ್ಮ ಕರ್ತವ್ಯದಲ್ಲಿ ತೊಡಗಿರುವರು...!



ಆತ್ಮೀಯ ಗೆಳೆಯ, ನಾಗೇಂದ್ರ ಜೆತೆಗೂಡಿ... ಶ್ರೀಯುತರ ಮನೆಯಲ್ಲಿ, ಅವರೋಂದಿಗೆ...
ಇಂದು, ದೀಪಾವಳಿಯ ಸಂಜೆ... ಬೆಳಕಿನಹಬ್ಬವನ್ನಾಚರಿದೆವು...!
ಇದು ನಿಜಕ್ಕೂ, ನಮ್ಮ ಭಾಗ್ಯವೇ ಸರಿ...! 
ಇದೊಂದು, ಅವಿಸ್ಮರಣೀಯ ಆನಂದ... ಅನುಭೂತಿ...!:)

ಶ್ರೀಯುತ ಲಕ್ಷ್ಮಣ್ ಅವರಿಗೆ... ಹಾಗೂ ಅವರ ಕುಟುಂಬಸದಸ್ಯರಿಗೆ...
ಹಾಗೂ, ಇಂತಹ ಅಸಂಖ್ಯ ಯೋಧ ಬಂಧುಗಳಿಗೆ... ಭಾವಪೂರ್ಣ ನಮನಗಳು...
ದೀಪಾವಳಿಯ ಹಾರ್ದಿಕ ಶುಭಾಶಯಗಳು...